Random Video

ash Fans Are Angry with Rashmika Mandanna | Filmibeat Kannada

2017-06-26 3 Dailymotion

Kananda Actor Rocking Star Yash Fans are Angry with Rashmika Mandanna.

ಸಿನಿಮಾ ನಟ ನಟಿಯರು ಒಂದು ಮಾತು ಆಡುವಾಗಲೂ ಎಚ್ಚರಿಕೆಯಿಂದ ಇರಬೇಕು. ಯಾಕಂದ್ರೆ ಮಾತನಾಡುವಾಗ ಸ್ವಲ್ಪ ಏನಾದರೂ ಹೆಚ್ಚು ಕಡಿಮೆ ಆದರೂ ಅದು ದೊಡ್ಡ ಸುದ್ದಿಯಾಗಿ ಬಿಡುತ್ತೆ. ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು ಎನ್ನುವ ಪರಿಸ್ಥಿತಿ ಈಗ ರಶ್ಮಿಕಾ ಮಂದಣ್ಣ ಅವರದ್ದಾಗಿದೆ. ಇತ್ತೀಚಿಗಷ್ಟೆ ನಡೆದ ಸಂದರ್ಶನವೊಂದರಲ್ಲಿ ರಶ್ಮಿಕಾ ಮಂದಣ್ಣ ಯಶ್ ಬಗ್ಗೆ ಒಂದು ಮಾತನ್ನು ಆಡಿದ್ದರು. ಅದೇ ಮಾತು ಈಗ ಯಶ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ರಶ್ಮಿಕಾ ಅವರು ಯಶ್ ಗೆ ಕ್ಷಮೆ ಕೇಳಬೇಕು ಅಂತ ಯಶ್ ಅಭಿಮಾನಿಗಳು ಹಠ ಹಿಡಿದು ಕುಳಿತಿದ್ದಾರೆ.

ಇತ್ತೀಚಿನ ಸಂದರ್ಶನ ವೊಂದರಲ್ಲಿ ರಶ್ಮಿಕಾ ಅವರಿಗೆ ನಿರೂಪಕರು ಕನ್ನಡದ ಯಾವ ನಟ ಮಿಸ್ಟರ್ ಶೋ ಆಫ್ ಅಂತ ನಿಮಗೆ ಅನಿಸುತ್ತದೆ ಅಂತ ಪ್ರಶ್ನೆ ಕೇಳಿದ್ದರು

ನಿರೂಪಕರ ಆ ಪ್ರಶ್ನೆಗೆ ರಶ್ಮಿಕಾ ಮೊದಲು 'ಯಾರು ಇಲ್ಲ.. ನಾನು ಸುಮ್ನೆ ಈ ಪ್ರಶ್ನೆಗೆ ಉತ್ತರಿಸಿ ತೊಂದರೆಗೆ ಸಿಕ್ಕಿ ಹಾಕಿ ಕೊಳ್ಳುವುದಿಲ್ಲ' ಅಂತ ಹೇಳಿದರು. ಕೊನೆಗೆ ಯಶ್ ಅಂತ ಹೇಳೇಬಿಟ್ಟರು.

ರಶ್ಮಿಕಾ ಅವರ ಈ ಉತ್ತರಕ್ಕೆ ಯಶ್ ಅಭಿಮಾನಿಗಳು ಗರಂ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಯಶ್ ಫ್ಯಾನ್ಸ್ ರಶ್ಮಿಕಾ ಅವರ ವಿರುದ್ಧ ಗುಡುಗಿದ್ದಾರೆ.

''ಯಶ್ ಅವರ ಬಗ್ಗೆ ಯಾರೂ ಸರ್ಟಿಫಿಕೇಟ್ ಕೊಡುವುದು ಬೇಕಾಗಿಲ್ಲ. ಅವರ ಬಗ್ಗೆ ಎಲ್ಲರಿಗೂ ಗೊತ್ತಿದೆ. ನಮ್ಮ ಯಶ್ Mr Show Off ಅಲ್ಲಾ, Mr Show Man. ಯಶ್ ಬಾಸ್ ಗೆ ಕ್ಷಮೆ ಕೇಳಬೇಕು'' ಅಂತ ಯಶ್ ಅಭಿಮಾನಿಗಳು ಹೇಳುತ್ತಿದ್ದಾರೆ.

ರಶ್ಮಿಕಾ ಈ ಹಿಂದೆ ಕೆಲ ಬಾರಿ ಯಶ್ ಅವರ ನಟನೆ ಅಂದ್ರೆ ನನಗೆ ಇಷ್ಟ. ಅವರ ಜೊತೆ ಸಿನಿಮಾ ಸಿಕ್ಕರೆ ಹಿಂದು ಮುಂದು ನೋಡದೆ ಒಪ್ಪಿಕೊಳ್ಳುತ್ತೇನೆ ಅಂತ ಹೇಳಿದ್ದರು. ಅಲ್ಲದೆ ಅದೇ ಸಂದರ್ಶನದಲ್ಲಿ ಯಶ್ ಬಗ್ಗೆ ಪಾಸಿಟಿವ್ ಆಗಿ ಸಹ ಮಾತನಾಡಿದ್ದಾರೆ.

ರಶ್ಮಿಕಾ ಮಂದಣ್ಣ ಅವರ ಆ ಸಂದರ್ಶನವನ್ನು ಗಮನಿಸಿದರೆ ಅದು ಬೇಕು ಅಂತ ಹೇಳಿರುವ ಮಾತಲ್ಲ ಅಂತ ಗೊತ್ತಾಗುತ್ತೆ. ಅಲ್ಲದೆ ಆ ಪ್ರಶ್ನೆಗೆ ಅವ್ರು ಸ್ವಲ್ಪ ಟೈಂ ತೆಗೆದುಕೊಂಡು ಕೊನೆಗೆ ಒಂದು ಹೆಸರು ಹೇಳಬೇಕಲ್ಲ ಅಂತ ಆತುರದಲ್ಲಿ ಹೇಳಿಬಿಟ್ಟಿದ್ದಾರೆ.